You are here
Home > Crime News > ಇಬ್ಬರನ್ನು ನಂಬಿಸಿ ಮದ್ವೆಯಾಗಿ ಹಣ ಪಡೆದು ಮೂರನೇಯವಳೊಂದಿಗೆ ಎಸ್ಕೇಪ್

ಇಬ್ಬರನ್ನು ನಂಬಿಸಿ ಮದ್ವೆಯಾಗಿ ಹಣ ಪಡೆದು ಮೂರನೇಯವಳೊಂದಿಗೆ ಎಸ್ಕೇಪ್

ತುಮಕೂರು: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮೂವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಒಬ್ಬಳ ಬಳಿ ಮದುವೆಯಾಗಿ 18 ಲಕ್ಷ ಪಡೆದು, ಮತ್ತೊಬ್ಬಳ ಬಳಿಯಿಂದ ಅನಾಥ ಎಂಬ ನಾಟಕವಾಡಿ ಮಗು ಕರುಣಿಸಿದ್ದಾನೆ. ಇನ್ನೊಬ್ಬಳ ಸಂಗ ಬೆಳೆಸಿದ್ದಾನೆ. ಇವನನ್ನ ನಂಬಿ ತಮ್ಮ ಜೀವನವನ್ನೇ ಅರ್ಪಿಸಿದ್ದ ಮೊದಲ ಇಬ್ಬರು ಮಡದಿಯರೀಗ ಬೀದಿ ಬೀದಿ ಅಲೆಯುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಸವದತ್ತಿ ಮೂಲದ ಇಬ್ಬರು ಮಹಿಳೆಯರ ಜೀವನವನ್ನೇ ಶ್ರೀಶೈಲ ಹಾಳು ಮಾಡಿದ್ದಾನೆ. ಮೊದಲು ನನಗೆ ಒಳ್ಳೆಯ ಕೆಲಸ ಇದೆ ಎಂದು ರಾಯಚೂರಿನ ಶ್ರೀದೇವಿಯನ್ನ ಮದುವೆಯಾಗಿ, ಬ್ಯುಸಿನೆಸ್‍ಗೆ ಎಂದು 18 ಲಕ್ಷ ಪಡೆದು ಓಡಿಹೋಗಿದ್ದನು.

ಖಾಸಗಿ ಶಾಲೆಯೊಂದರಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿರೋ ಶ್ರೀದೇವಿಗೆ ಕೆಲ ತಿಂಗಳ ಹಿಂದೆ ತನ್ನ ಪತಿರಾಯ ತುಮಕೂರಿನ ಫ್ಯಾಕ್ಟರಿಯೊಂದ್ರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಅದರಂತೆ ತುಮಕೂರಿಗೆ ಬಂದ ಶ್ರೀದೇವಿ ಪತಿಯನ್ನೂ ಭೇಟಿಯಾಗಿದ್ದಳು. ಗಂಡ ಸಿಕ್ಕ ಖುಷಿ ಒಂದೆಡೆಯಾದ್ರೆ, ದೊಡ್ಡ ಆಘಾತವೂ ಆಕೆಗೆ ಕಾದಿತ್ತು. ಯಾಕೆಂದರೆ ಶ್ರೀಶೈ¯ ಅದಾಗಲೇ ತುಮಕೂರಿನ ಸಿದ್ದಾರ್ಥ ನಗರದ ಶಿಲ್ಪಾ ಎಂಬವಳ ಜೊತೆ ಮತ್ತೊಂದು ಮದುವೆ ಮಾಡಿಕೊಂಡು ಬಿಟ್ಟಿದ್ದನು. ನಾನೊಬ್ಬ ಅನಾಥ ನನಗೆ ತಂದೆ ಇದ್ದಾರೆ. ಆದರೆ ಅವರಿಗೂ ನನಗೂ ಅಷ್ಟಕ್ಕಷ್ಟೇ ಎಂದು ನಂಬಿಸಿ ಶಿಲ್ಪಾಳನ್ನೂ ಮದುವೆಯಾಗಿ ಮಗು ಕರುಣಿಸಿದ್ದನು. ಅಲ್ಲದೆ ಮಗುವಾಗುತ್ತಿದ್ದಂತೆಯೇ ಪರಾರಿಯಾಗಿದ್ದನು. ಈಗ ಅವರನ್ನೂ ಬಿಟ್ಟು ಮೂರನೇ ಮಹಿಳೆ ಜೊತೆ ಓಡಿಹೋಗಿದ್ದಾನೆ ಎಂದು ಎರಡನೇ ಪತ್ನಿಯ ತಾಯಿ ಶಿವಮ್ಮ ದೂರಿದ್ದಾರೆ.

ಇತ್ತ ನ್ಯಾಯ ಬೇಕು ಎಂದು ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಶ್ರೀದೇವಿ ದೂರು ನೀಡಿದ್ದಾರೆ. ಈ ದೂರಿಗೆ ಪೊಲೀಸರು ಕ್ಯಾರೆ ಅನ್ನುತ್ತಿಲ್ಲ. ಶ್ರೀಶೈಲ ಮಾತ್ರ ಶರ್ಟ್ ಬದಲಿಸಿದ ರೀತಿಯಲ್ಲಿ ಹೆಂಡತಿಯರನನ್ನು ಬದಲಿಸುತ್ತಾ ಮೋಸ ಮಾಡುತ್ತಿದ್ದಾನೆ.
**

Leave a Reply

Top