You are here
Home > Education > ಮಣ ತೂಕದ ಬ್ಯಾಗ್ ಭಾರಕ್ಕೆ ಬ್ರೇಕ್

ಮಣ ತೂಕದ ಬ್ಯಾಗ್ ಭಾರಕ್ಕೆ ಬ್ರೇಕ್

ಬೆಂಗಳೂರು: 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಶಾಲಾ ಬ್ಯಾಗ್ ತೂಕ ವಿದ್ಯಾರ್ಥಿ ದೇಹ ತೂಕದ ಸರಾಸರಿ ಶೇಕಡ 10ರಷ್ಟು ಮೀರಬಾರದು ಎಂದು ಆದೇಶ ಹೊರಡಿಸಲಾಗಿದೆ.

ನೂತನ ಆದೇಶದನ್ವಯ 1 ರಿಂದ 2 ನೇ ತರಗತಿವರೆಗಿನ ಮಕ್ಕಳ ಬ್ಯಾಗ್ ತೂಕ 1.5 ರಿಂದ 2 ಕೆಜಿ, 3 ರಿಂದ 5 ನೇ ತರಗತಿ ವರೆಗಿನ ಮಕ್ಕಳ ಬ್ಯಾಗ್ ತೂಕ 2 ರಿಂದ 3 ಕೆಜಿ, 6 ರಿಂದ 8ನೇ ತರಗತಿಯವರೆಗಿನ ಮಕ್ಕಳ ಬ್ಯಾಗ್ ತೂಕ 3 ರಿಂದ 4 ಕೆಜಿ ಹಾಗೂ 9 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕ 4 ರಿಂದ 5 ಕೆಜಿ ಎಂದು ನಿಗದಿಪಡಿಸಲಾಗಿದೆ.

ಅಲ್ಲದೆ ಪ್ರತಿ ತಿಂಗಳ ಮೂರನೇ ಶನಿವಾರವನ್ನು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಆ ದಿನ ಶಿಕ್ಷಕರು ಪಠ್ಯ ಪುಸ್ತಕ ಅಥವಾ ಇತರ ಪೂರಕ ಸಾಮಗ್ರಿಗಳ ಅವಶ್ಯಕತೆ ಇಲ್ಲದೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕಿದೆ.

ಅಷ್ಟೇ ಅಲ್ಲ, 1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡಬಾರದು ಎಂದೂ ಸಹ ಸೂಚಿಸಲಾಗಿದ್ದು, ಜೊತೆಗೆ ಕಡಿಮೆ ಖರ್ಚಿನ ಹಾಗೂ ಹಾಗೂ ದೀರ್ಘ ಕಾಲ ಬಾಳಿಕೆ ಬರುವ ಲೇಖನಿ ಸಾಮಗ್ರಿಗಳನ್ನು ವಿದ್ಯಾರ್ಥಿಗಳು ಬಳಸುವಂತೆ ಪ್ರೋತ್ಸಾಹಿಸಲು ಶಿಕ್ಷಕರಿಗೆ ತಿಳಿಸಲಾಗಿದೆ.

Leave a Reply

Top