You are here
Home > Entertainment > ಸಿನಿಮಾ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಶಾರೂಕ್ ಸಪ್ರ್ರೈಸ್

ಸಿನಿಮಾ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಶಾರೂಕ್ ಸಪ್ರ್ರೈಸ್

ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ತಮ್ಮ `ಮನ್ನತ್’ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಸಪ್ರ್ರೈಸ್ ನೀಡಿದ್ದಾರೆ.
ಶಾರೂಕ್ ಖಾನ್ ಪ್ರತಿ ವರ್ಷ ತಮ್ಮ ಮನ್ನತ್ ಮನೆಯಲ್ಲಿ ಈದ್ ಆಚರಿಸುತ್ತಾರೆ. ಬಳಿಕ ತಮ್ಮ ಟೆರೇಸ್‍ಗೆ ಹೋಗಿ ಮನೆಯ ಹೊರಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸುತ್ತಾರೆ. ಹಾಗೆಯೇ ರಂಜಾನ್ ಹಬ್ಬದಂದು ಕೂಡ ಶಾರೂಕ್ ಮನೆಯ ಹೊರಗೆ ಬಂದು ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

ಶಾರೂಕ್ ಈ ಬಾರಿ ತಮ್ಮ ಕಿರಿಯ ಮಗ ಅಬ್ರಾಹಂ ಹಾಗೂ ಅಮೆರಿಕ ಚ್ಯಾಟ್ ಶೋ ನಿರೂಪಕ ಡೇವಿಡ್ ಲೆಟರ್ಮ್ಯಾನ್ ಜೊತೆ ಮನೆಯ ಟೆರೇಸ್ ಬದಲು ಕಾರಿನ ಮೇಲೆ ನಿಂತುಕೊಂಡು ಅಭಿಮಾನಿಗಳಿಗೆ ಶುಭಾಶಯ ತಿಳಿಸುವ ಮೂಲಕ ಸಪ್ರ್ರೈಸ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಶಾರೂಕ್ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ವೇಳೆ ಶಾರೂಕ್ ಕಪ್ಪು ಬಣ್ಣದ ಟೀ-ಶರ್ಟ್‍ಗೆ ಶರ್ಟ್ ಧರಿಸಿ ಅದಕ್ಕೆ ನೀಲಿ ಬಣ್ಣದ ಡೆನಿಮ್ ಧರಿಸಿದ್ದರು.

Leave a Reply

Top