You are here
Home > Crime News

ಡ್ರೈವರ್ ಸಮಯ ಪ್ರಜ್ಞೆಯಿಂದ 50 ಮಂದಿ ಪಾರು

ಚಾಮರಾಜನಗರ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗಿದೆ. ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟ- ಕೋಣನಕೆರೆ ಮಾರ್ಗದಲ್ಲಿ ಮಂಗಳವಾರ ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಟೇರಿಂಗ್ ಕಟ್ ಆಗಿದೆ. ಇದನ್ನು ಅರಿತ ಬಸ್ ಚಾಲಕ ಪ್ರಪಾತಕ್ಕೆ ಬೀಳಬೇಕಿದ್ದ ಬಸ್‍ನ್ನು ಮರಕ್ಕೆ ಡಿಕ್ಕಿ ಹೊಡಿಸಿದ್ದಾನೆ. ಇದ್ದರಿಂದ ಬಾರಿ ಅನಾಹುತ ತಪ್ಪಿ 50 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಡಿದಿದ್ದನ್ನ ಪ್ರಶ್ನಿಸಿದ ಪತ್ನಿಗೆ ಚಾಕುವಿನಿಂದ ಇರಿದ ಪತಿ

ಬೆಂಗಳೂರು: ಕುಡಿದಿದನ್ನು ಪ್ರಶ್ನೆ ಮಾಡಿದಕ್ಕೆ ಪತಿಯೊಬ್ಬ ತನ್ನ ಪತ್ನಿಯ ಕುತ್ತಿಗೆಗೆ ಚಾಕು ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ. ಪ್ರದೀಪ್ ಪತ್ನಿಯ ಕುತ್ತಿಗೆಗೆ ಚಾಕು ಇರಿದ ಆರೋಪಿ. ಪ್ರದೀಪ್ ತನ್ನ ಪತ್ನಿ ತಪಸ್ವಿನಿ ಜೊತೆ ಕುಡಿದ ಮತ್ತಿನಲ್ಲಿ ಜಗಳವಾಡುತ್ತಿದ್ದನು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮದ್ಯದ ಅಮಲಿನಲ್ಲಿ ಪ್ರದೀಪ್ ತನ್ನ ಪತ್ನಿಯ ಕುತ್ತಿಗೆಯನ್ನು ಚಾಕುವಿನಿಂದ ಇರಿದಿದ್ದಾನೆ. ಪ್ರದೀಪ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದು, ತಪಸ್ವಿನಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಇಬ್ಬರನ್ನು ನಂಬಿಸಿ ಮದ್ವೆಯಾಗಿ ಹಣ ಪಡೆದು ಮೂರನೇಯವಳೊಂದಿಗೆ ಎಸ್ಕೇಪ್

ತುಮಕೂರು: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮೂವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಒಬ್ಬಳ ಬಳಿ ಮದುವೆಯಾಗಿ 18 ಲಕ್ಷ ಪಡೆದು, ಮತ್ತೊಬ್ಬಳ ಬಳಿಯಿಂದ ಅನಾಥ ಎಂಬ ನಾಟಕವಾಡಿ ಮಗು ಕರುಣಿಸಿದ್ದಾನೆ. ಇನ್ನೊಬ್ಬಳ ಸಂಗ ಬೆಳೆಸಿದ್ದಾನೆ. ಇವನನ್ನ ನಂಬಿ ತಮ್ಮ ಜೀವನವನ್ನೇ ಅರ್ಪಿಸಿದ್ದ ಮೊದಲ ಇಬ್ಬರು ಮಡದಿಯರೀಗ ಬೀದಿ ಬೀದಿ ಅಲೆಯುತ್ತಿದ್ದಾರೆ. ಧಾರವಾಡ ಜಿಲ್ಲೆಯ ಸವದತ್ತಿ ಮೂಲದ ಇಬ್ಬರು ಮಹಿಳೆಯರ ಜೀವನವನ್ನೇ ಶ್ರೀಶೈಲ ಹಾಳು ಮಾಡಿದ್ದಾನೆ. ಮೊದಲು ನನಗೆ ಒಳ್ಳೆಯ ಕೆಲಸ ಇದೆ ಎಂದು ರಾಯಚೂರಿನ

ಧಾರಾಕಾರ ಮಳೆಗೆ ಲಾರಿಗಳು ಪಲ್ಟಿ- ಕೊಚ್ಚಿ ಹೋದ ಕಾರುಗಳು

ಬಳ್ಳಾರಿ: ಆಂಧ್ರ ಸೇರಿದಂತೆ ಬಳ್ಳಾರಿ ಗಡಿಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಅವಾಂತರವೇ ಸೃಷ್ಟಿಯಾಗಿದೆ. ಸಿರಗುಪ್ಪ ತಾಲೂಕಿನ ರಾರಾವಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆಯ ಮೇಲೆ ತಡೆ ಗೋಡೆ ಇಲ್ಲದ ಕಾರಣ ರಸ್ತೆ ಕಾಣದೆ ಎರಡು ಲಾರಿ ಒಂದು ಬಸ್ ಪಲ್ಟಿ ಹೊಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬಸ್ ಬೀಳುತ್ತಿದ್ದಂತೆ ಸ್ಥಳೀಯರು ಪ್ರಯಾಣಿಕರನ್ನು ಪಾರು ಮಾಡಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಆಂಧ್ರ ಮತ್ತು ಕರ್ನಾಟಕ ಸಂಪರ್ಕ ಸೇತುವೆಯಾದ ರಾರಾವಿ ಸೇತುವೆಗೆ ತಡೆಗೋಡೆ ನಿರ್ಮಿಸಲು

ಆಯುಕ್ತರಿಂದ ಮಿಡ್‍ನೈಟ್ ರೌಂಡ್ಸ್ ಮೆಜೆಸ್ಟಿಕ್‍ನಲ್ಲಿ ಲೇಡಿಸ್ ಬಾರ್ ಮೇಲೆ ದಾಳಿ

ಬೆಂಗಳೂರು: ನಗರದ ನೂತನ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ನೈಟ್ ರೌಂಡ್ಸ್ ಹಾಕಿದ್ದಾರೆ. ಇತ್ತ ರಾತ್ರೋರಾತ್ರಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪಬ್ ಮತ್ತು ಬಾರ್‍ಗಳಿಂದ ಶಬ್ಧ ಮಾಲಿನ್ಯ ಪ್ರಕರಣ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರ ಕಾರ್ಯವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಶಬ್ಧ ಮಾಲಿನ್ಯ ಮಾಪನದ ವಿಧಾನದಲ್ಲೇ ದೋಷ ಎಂದು ಹೈಕೋರ್ಟ್ ಕಿಡಿಕಾರಿತ್ತು. ಈ ಹಿನ್ನೆಲೆಯಲ್ಲಿ ತಡರಾತ್ರಿ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಚರ್ಚ್ ಸ್ಟ್ರೀಟ್ ಗೆ ದಿಢೀರ್

ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹೋದರ ವಿಧಿವಶ

ಬೆಂಗಳೂರು: ಮಾಜಿ ಎಂಎಲ್‍ಸಿ ಎಸ್.ಎಂ.ಶಂಕರ್ (83) ವಿಧಿವಶರಾಗಿದ್ದಾರೆ. ಎಸ್.ಎಂ.ಶಂಕರ್ ಅವರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಸಹೋದರನಾಗಿದ್ದು, ಇವರು ಹಲವು ದಿನಗಳಿಂದ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಎಸ್.ಎಂ.ಶಂಕರ್ ಅವರು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ಆಯ್ಕೆಯಾಗಿದ್ದರು. ಅವರ ಸ್ವಗ್ರಾಮ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. **

ಲಾರಿ ಅಪಘಾತ ತಪ್ಪಿಸಲು ಹೋಗಿ ಸೇತುವೆಗೆ ಬಸ್ ಡಿಕ್ಕಿ

ಕಲಬುರಗಿ: ಲಾರಿ ಅಪಘಾತ ತಪ್ಪಿಸಲು ಹೋದ ಬಸ್ ಚಾಲಕ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಕಲಬುರಗಿ ಜಿಲ್ಲೆ ಕನಕಪುರ ಗ್ರಾಮದ ಬಳಿ ನಡೆದಿದೆ. ಡಿಕ್ಕಿ ಹೊಡೆದ ಕೆಎಸ್‍ಆರ್ ಟಿಸಿ ಬಸ್ ಸೇತುವೆ ಅಂಚಿಗೆ ತಲುಪಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಬಸ್‍ನಲ್ಲಿದ್ದ ಪ್ರಯಾಣಿಕರು ಕೆಲವರು ಪ್ರಾಣ ಉಳಿಸಿಕೊಂಡರೆ ಸಾಕಪ್ಪ ಎಂದು ಬಸ್ಸಿನ ಕಿಟಕಿ ಮೂಲಕ ಹೊರಗೆ ಜಂಪ್ ಮಾಡಿದ್ದಾರೆ. ಮತ್ತೆ ಕೆಲವು ವಿದ್ಯಾರ್ಥಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಎಮರ್ಜೆನ್ಸಿ ಡೋರ್ ತೆಗೆದು ಜಂಪ್ ಮಾಡಿದ್ದಾರೆ.

ಸೆಲ್ಫಿ ವಿಡಿಯೋ ಮಾಡಿ ಮಹಿಳೆ ನೇಣಿಗೆ ಶರಣು

ಚಿಕ್ಕಬಳ್ಳಾಪುರ/ಬೆಂಗಳೂರು: ಮನೆ ಮಾಲೀಕರು ಮತ್ತು ಪೊಲೀಸರ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುಳಾ ಮೊಬೈಲ್‍ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನೆಲೆಯಲ್ಲಿ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು

ಜೂನ್ 25ರಂದು ಸಚಿವ ಡಿಕೆಶಿ ಭವಿಷ್ಯ ನಿರ್ಧಾರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕನಸಿನ ಹುದ್ದೆ ಏರಲೇಬೇಕು ಎಂದುಕೊಂಡಿರುವ ಸಚಿವ ಡಿಕೆ ಶಿವಕುಮಾರ್ ಭವಿಷ್ಯ ಜೂನ್ 25ಕ್ಕೆ ನಿರ್ಧಾರ ಆಗಲಿದೆ. ಜೂನ್ 25ರ ಸತ್ವ ಪರೀಕ್ಷೆಯಲ್ಲಿ ಪಾಸಾದರೆ, ರಾಜ್ಯ ಕಾಂಗ್ರೆಸ್‍ಗೆ ಡಿಕೆಶಿಯೆ ಅಧಿಪತಿ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಜೂನ್ 25ರಂದು ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರ ಐಟಿ ಕೇಸ್‍ಗೆ ಸಂಬಂಧಿಸಿದ ದೂರೊಂದರ ತೀರ್ಪು ಪ್ರಕಟವಾಗಲಿದೆ. ತೀರ್ಪು ಡಿ.ಕೆ ಶಿವಕುಮಾರ್ ಪರವಾಗಿ

ವಿರೋಧದ ಮಧ್ಯೆಯೂ ಸಿಎಂ ಐಷಾರಾಮಿ ಹೊಟೇಲ್‍ನಲ್ಲೇ ವಾಸ್ತವ್ಯ

ಬೆಂಗಳೂರು: ವಿರೋಧ ಇದ್ದರೂ ಸಿಎಂ ಐಷಾರಾಮಿ ಹೊಟೇಲ್ ವ್ಯಾಮೋಹ ಬಿಟ್ಟಿಲ್ಲ. ತಾಜ್ ವೆಸ್ಟ್ ಎಂಡ್‍ನಲ್ಲಿ ಇನ್ನೂ ಸಿಎಂ ವಾಸ್ತವ್ಯವನ್ನು ಮುಂದುವರಿಸಿದ್ದಾರೆ. ಇತ್ತಿಚೇಗೆ ಸಿಎಂ ತಾಜ್ ಹೊಟೇಲ್ ಬಿಟ್ಟು ಜೆ.ಪಿ ನಗರದ ಮನೆಗೆ ಶಿಫ್ಟ್ ಆಗಿದ್ದಾರೆ. ಜೆ.ಪಿ ನಗರದ ನಿವಾಸದಿಂದಲೇ ಓಡಾಡುವ ಮನಸ್ಸು ಮಾಡಿದ್ದಾರೆ ಅಂತ ಹೇಳಲಾಗಿತ್ತು. ಆದರೆ ಸಿಎಂ ತಾಜ್ ವಾಸ್ತವ್ಯವನ್ನು ಇನ್ನೂ ಬಿಟ್ಟಿಲ್ಲ. ಈಗಲೂ ತಾಜ್‍ನಲ್ಲೆ ಸಿಎಂ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಕೇವಲ ತೋರ್ಪಡಿಕೆಗೆ ಸಿಎಂ ವಾಸ್ತವ್ಯ ಬದಲಾವಣೆ ಅಂತ ಹೇಳಿಕೊಂಡ್ರಾ,

Top