You are here
Home > National

ತಾಯಿಯ ಆಶೀರ್ವಾದ ಪಡೆದು ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡುವ ಮುನ್ನ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದರು. ವ್ಯಾಪಕ ಭದ್ರತೆಯೊಂದಿಗೆ ರಾನಿಪ್‍ನ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನೋಡಲು ಸಾವಿರಾರು ಜನರ ಜಮಾವಣೆಗೊಂಡಿದ್ದರು. ವ್ಯಾಪಕ ಭದ್ರತೆ ಕೈಗೊಳ್ಳಲಾಗಿದ್ದು, ಸ್ವಮಲ್ಪ ದೂರ ತೆರದ ವಾಹನದಲ್ಲಿ ಆಗಮಿಸಿ ಹಕ್ಕು ಚಲಾವಣೆ ಮಾಡಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮತಗಟ್ಟೆಯ ಬಳಿ ಪ್ರಧಾನಿ ನರೇಂದ್ರ

ಪಾಕ್‍ನಿಂದ ಬಿಡುಗಡೆಗೊಂಡ ಅಭಿನಂದನ್‍ಗೆ ವೈದ್ಯಕೀಯ ತಪಾಸಣೆ

ನವದೆಹಲಿ: ಶುಕ್ರವಾರ ರಾತ್ರಿ ತಾಯ್ನಾಡು ಭಾರತಕ್ಕೆ ವಾಪಸ್ ಆಗಿರೋ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಇಂದು ದೆಹಲಿಯಲ್ಲಿ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಯಲಿದೆ. ನಿನ್ನೆ ಅಟಾರಿ ಗಡಿಯಿಂದ ಅಮೃತಸರಕ್ಕೆ ತೆರಳಿದ ಧೀರಯೋಧ ಅಭಿನಂದನ್ ಅಲ್ಲಿಂದ ದೆಹಲಿ ತಲುಪಿದ್ದಾರೆ. ಹೀಗಾಗಿ ಇಂದು ಅಲ್ಲಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಯಲಿದೆ. ಪ್ಯಾರಾಚೂಟ್‍ನಿಂದ ಜಿಗಿದಿದ್ದ ಕಾರಣ ವಾರದ ಕಾಲ ತಪಾಸಣೆ ಜೊತೆಗೆ ಭಾರತೀಯ ಸೇನೆ ವಿಚಾರಣೆಗೆ ಒಳಪಡಿಸಲಿದೆ ಎನ್ನಲಾಗಿದೆ. ಅಭಿನಂದನ್ ಎದುರಿಸಬಹುದಾದ ವಿಚಾರಣೆಗಳು..? ವಾಯುಸೇನೆ ಅಧಿಕಾರಿಗಳು ವಾಯುಸೇನೆಯ

ಲೀಡ್ ಅಭಿನಂದನ್ ಇಂದು ಬಿಡುಗಡೆ ಸ್ವಾಗತಕ್ಕೆ ಕಾದಿದೆ ವಾಘಾ ಗಡಿ ಬಾಗಿಲು

ನವದೆಹಲಿ: ಧೀರಯೋಧ ಅಭಿನಂದನ್ ವರ್ತಮಾನ್ ಇಂದು ಮಧ್ಯಾಹ್ನ ಸ್ವದೇಶಕ್ಕೆ ಆಗಮಿಸಲಿದ್ದಾರೆ. ಎರಡು ದಿನಗಳಿಂದ ಪಾಕ್ ಕಪಿ ಮುಷ್ಟಿಯಲ್ಲಿದ್ದ ಅಭಿನಂದನ್‍ರನ್ನು ಶಾಂತಿ ಸ್ಥಾಪನೆ ಉದ್ದೇಶದಿಂದ ಬಿಡುಗಡೆ ಮಾಡೋದಾಗಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲಿ ಹೇಳಿದ್ದರು. ಯಾವುದೇ ಷರತ್ತುಗಳಿಲ್ಲದೆ ಭಾರತದ ವಶಕ್ಕೆ ಒಪ್ಪಿಸುವುದಾಗಿ ಘೋಷಿಸಿದ್ದಾರೆ. ಸದ್ಯ ರಾವಲ್ಪಿಂಡಿಯ ಸೇನಾ ಮುಖ್ಯಕಚೇರಿಯಲ್ಲಿರುವ ಅಭಿನಂದನ್ ಅವರು ಆರೋಗ್ಯವಾಗಿದ್ದಾರೆ. ಇಂದು ರಾವಲ್ಪಿಂಡಿಯಿಂದ ಲಾಹೋರ್‍ಗೆ ಅಭಿನಂದನ್‍ರನ್ನು ಕರೆ ತಂದು ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಅವರಿಗೆ

ಒಂದು ವಾರ ಬಂಡಿಪುರದಲ್ಲಿ ಸಫಾರಿ ಬಂದ್!

ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆ ಒಂದು ವಾರಗಳ ಕಾಲ ಸಫಾರಿ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ಈ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡಿಪುರದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಪರಿಣಾಮ ಬೆಂಕಿಯಿಂದ ಬಂಡಿಪುರ ಕಾಡಿನ ಸಫಾರಿ ಝೋನ್ ನಾಶವಾಗಿದೆ. ಆದರಿಂದ ಸಫಾರಿ ಝೋನ್‍ನಲ್ಲಿ ಸಫಾರಿ ಬಂದ್ ಮಾಡಲಾಗಿದೆ. ನೂರಾರು ಪ್ರವಾಸಿಗರು ಸಫಾರಿಗಾಗಿ ಪ್ರತಿ ನಿತ್ಯ ಬಂಡಿಪುರಕ್ಕೆ ಬರುತ್ತಿದ್ದರು. ಸಫಾರಿಯಿಂದ ತಿಂಗಳಿಗೆ ಬಂಡಿಪುರದಲ್ಲಿ ಲಕ್ಷಾಂತರ ರೂಪಾಯಿ ಆದಾಯ

ಮುಂಬೈಯಲ್ಲಿ 50,000 ರೈತರಿಂದ ಬೃಹತ್ ಪ್ರತಿಭಟನೆ

ಮುಂಬೈ: ಮಹಾರಾಷ್ಟ್ರದಲ್ಲಿ ಇಂದಿನಿಂದ ಸುಮಾರು 50,000 ರೈತರಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಇದು ಒಂದು ವಾರಗಳ ಕಾಲ ಮುಂದುವರಿಯಲಿದೆ. ಮಹಾರಾಷ್ಟ್ರದ ನಾಸಿಕ್ ನಿಂದ ಆರಂಭವಾಗಿ ಮುಂಬೈಯಲ್ಲಿ ಪ್ರತಿಭಟನಕಾರರು ಸೇರಲಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾ ಈ ಪ್ರತಿಭಟನೆಯನ್ನು ನಡೆಸುತ್ತಿದ್ದು, ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆ, ನೀರಾವರಿ ಸೌಲಭ್ಯ, ರೈತರಿಗೆ ಪಿಂಚಣಿ ವ್ಯವಸ್ಥೆ ಮುಂತಾದ ಬೇಡಿಕೆಗಳೊಂದಿಗೆ ಈ ಪ್ರತಿಭಟನೆ ನಡೆಯಲಿದೆ. "ಮಹಾರಾಷ್ಟ್ರ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ರೈತರ ದನಿಯನ್ನು ಆಲಿಸುತ್ತಿಲ್ಲ. ಸರ್ಕಾರದ ಅವಧಿಗಳು

ಲೀಡ್ ಇಂದು ಏರ್ ಶೋ 2019ಕ್ಕೆ ಚಾಲನೆ ಲೋಹದ ಹಕ್ಕಿಗಳ ಚಿತ್ತಾರ

ಬೆಂಗಳೂರು: ಸೂರ್ಯಕಿರಣ್ ಆಗಸದಿಂದ ಧರೆಗುರುಳಿದ ಕಹಿ ನೆನಪಿನ ಮಧ್ಯೆಯೇ ಇಂದು ಬೆಂಗಳೂರಿನಲ್ಲಿ ಏರ್ ಶೋ 2019 ನಡೆಯಲಿದೆ. ಯಲಹಂಕ ವಾಯುನೆಲೆಯಲ್ಲಿ ದೇಶ-ವಿದೇಶದ ಯುದ್ಧ ವಿಮಾನಗಳ ಖದರ್ ಮಧ್ಯೆಯೇ ನಭೋಮಂಡಲದಲ್ಲಿ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸಿ ದೇಶಭಕ್ತಿಯ ಕಿಚ್ಚು ಹಚ್ಚುತ್ತಿದ್ದ ಸೂರ್ಯಕಿರಣ್ ಇಲ್ಲದೆ ಈ ಬಾರಿ ಏರ್ ಶೊ ಕೊಂಚ ಸಪ್ಪೆಯಾಗಿದೆ. ನೀಲನಭದಲ್ಲಿ ಸಾರಂಗದ ವೈಯಾರ ಸೂರ್ಯಕಿರಣನ ನರ್ತನ, ಆಗಸದಲ್ಲಿ ಯುದ್ಧ ವಿಮಾನಗಳ ಘರ್ಜನೆ. ಇದರ ಮಧ್ಯೆಯೇ ಆಗಸವನ್ನೇ ಸೀಳಿಕೊಂಡು ಥೇಟು ಹೀರೋನಂತೆ

ಏರ್ ಶೋ ಪ್ರಾಯೋಗಿಕ ಪ್ರದರ್ಶನ ಆರಂಭ

ಬೆಂಗಳೂರು : ದೇಶದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2019 ಆರಂಭಕ್ಕೆ ಎರಡು ದಿನ ಬಾಕಿ ಇರುವ ಮುನ್ನವೆ ಇಂದು ನಗರದ ಯಲಹಂಕ ವಾಯುನೆಲೆಯಲ್ಲಿ ರಫೇಲ್, ತೇಜಸ್, ಸೂರ್ಯಕಿರಣ ಸೇರಿದಂತೆ ವಿವಿಧ ದೇಶ-ವಿದೇಶಿ ಯುದ್ಧ ವಿಮಾನಗಳು ಪ್ರದರ್ಶನ ನಡೆಸಿತು. 12ನೇ ಏರೋ ಇಂಡಿಯಾ ಶೋಗೆ ದಿನಗಣನೆ ಆರಂಭವಾಗಿದ್ದು, ಫೆ. 20ರಂದು ಉದ್ಘಾಟನೆಗೊಳ್ಳಲಿದೆ. ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಯುದ್ಧ ಸಾಮಗ್ರಿಗಳ ಪ್ರದರ್ಶನ, ಯುದ್ಧ ಹಾಗೂ ನಾಗರೀಕ ಸೇವಾ

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ವಿಶ್ವಚೇತನ ಪ್ರಶಸ್ತಿ

ಬೆಳಗಾವಿ/ಚಿಕ್ಕೋಡಿ: ಖ್ಯಾತ ಕ್ರಿಕೆಟ್ ಆಟಗಾರ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವದಲ್ಲಿ ಕಾಡಸಿದ್ದೇಶ್ವರ ಮಠದಿಂದ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಯಡೂರು ಮಠದ ಪೀಠಾಧಿಪತಿಗಳು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಸ್ವಾಮೀಜಿ, ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಕಾಶಿ ಜಗದ್ಗುರು ಸ್ವಾಮೀಜಿಗಳು ಕ್ರಿಕೆಟಿಗ ಅನಿಲ್

ನಮ್ಮ ಮೆಟ್ರೋದಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶ

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‍ಫಾಮ್ರ್ ಪ್ರವೇಶಿಸಲು ಮುಂದಿನ ದಿನಗಳಲ್ಲಿ ಗರ್ಭಿಣಿಯರು ಸ್ವಯಂಚಾಲಿತ ಟೋಕನ್ ಸಂಗ್ರಹ (ಎಎಫ್‍ಸಿ) ಬದಲಿಗೆ ಸಿಬ್ಬಂದಿ ಗೇಟ್ ಬಳಸಲು ಬಿಎಂಆರ್‍ಸಿಎಲ್ ಅವಕಾಶ ನೀಡಿದೆ. ಹಲವು ಗರ್ಭಿಣಿಯರು ತಾವು ಪ್ರಯಾಣ ಮಾಡುವ ಸಲುವಾಗಿ ಮೆಟ್ರೋ ನಿಲ್ದಾಣದಲ್ಲಿಕ್ಕೆ ಬಂದತಹ ವೇಳೆಯಲ್ಲಿ ನಾವು ಟೋಕನ್ ಸಂಗ್ರಹ (ಎಎಫ್‍ಸಿ) ಗೇಟ್ ಮುಖಾಂತರ ಹೋಗುವುದಕ್ಕೆ ಹೆದರಿಕೆ ಉಂಟಾಗುತ್ತದೆ ಅಂತ ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು. ಇನ್ನು ಈ

Top